Mysore tatayya image

ತಾತಯ್ಯ ನವರ ಕುರಿತು ಗಣ್ಯರ ಅಭಿಪ್ರಾಯಗಳು :

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

- ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

- ದಿವಂಗತ ಶ್ರೀ ಚಾಮರಾಜ ಒಡೆಯರ್ , ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

- ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

- ಶ್ರೀ ವಿ.ವಿ. ಗಿರಿ , ಭಾರತದ ಮಾಜಿ ರಾಷ್ಟ್ರಪತಿಗಳು

ಅತ್ಯಂತ ವಿಶಾಲ ಮನೋಭಾವ ಹೊಂದಿದ್ದ ಶ್ರೀ ವೆಂಕಟಕೃಷ್ಣಯ್ಯನವರು ಸಾಮಾಜಿಕ ಸಮರಸತೆಯ ಬಹುದೊಡ್ಡ ಪ್ರತಿಪಾದಕರು. ಅನೇಕ ಬ್ರಾಹ್ಮಣೇತರ ವ್ಯಕ್ತಿಗಳಿಗೆ ಅವರು ತಂದೆಯಂತೆ ಮಾರ್ಗದರ್ಶನ ನೀಡಿ ಮುನ್ನಡೆಸಿದ್ದಾರೆ. ಅವರಲ್ಲಿ ಇಂದು ಅನೇಕರು ಸಾಮಾಜಿಕವಾಗಿ ಉನ್ನತ ಸ್ಥಾನಗಳನ್ನು ಗಳಿಸಿ ತಾತಯ್ಯ ನವರನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದಾರೆ. ಅವರು ಸಮಾಜಕ್ಕಾಗಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ಬಡವರಾಗಿಯೇ ಅಸ್ತಂಗತರಾದರು. ಅವರಿಗೆ ನನ್ನ ನಮನ.

- ರಾಜಸಭಾಭೂಷಣ ದಿವಾನ್ ಬಹದೂರ್ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ

ವೆಂಕಟಕೃಷ್ಣಯ್ಯನವರು ಬಹಳ ದಯಾಶಾಲಿಗಳು, ಪರೋಪಕಾರಶೀಲರು, ಇವರಿಗೆ 'ದಯಾಸಾಗರ' ಎಂಬ ಬಿರುದು ಅನ್ವರ್ಥ. ಮಹಾತ್ಮ ಗಾಂಧೀಜಿಯವರು ಇವರನ್ನು ಭೀಷ್ಮರಿಗೆ ಹೋಲಿಸಿದರು.

- ಲೋಕಸೇವಾನಿರತ ಅಂಬ್ಳೆ ಅಣ್ಣಯ್ಯ ಪಂಡಿತರು

ಇವರೊಡನೆ ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಅಸೆಂಬ್ಲಿಯ ಸದಸ್ಯನಾಗಿ ನಾನು ಇದ್ದಾಗ ಇವರ ಅಸಾಧಾರಣ ದೇಶಾಭಿಮಾನವನ್ನೂ, ಧೈರ್ಯವನ್ನೂ ಸ್ವಾರ್ಥತ್ಯಾಗ ಮನೋಭಾವವವನ್ನೂ ನೋಡಿ ಅನುಭವಿಸಿದ್ದೇನೆ. ಅಸೆಂಬ್ಲಿಯು ನಡೆಯುವ ಕಾಲದಲ್ಲಿ ಅಸೆಂಬ್ಲಿಯ ಸದಸ್ಯರನೇಕರು ಅವರ ಮನೆಯಲ್ಲಿ ಕಲೆತು ಪಾರ್ಲಿಮೆಂಟರಿ ಆಪೋಸಿಷನ್‌ನಂತೆ ಅಸೆಂಬ್ಲಿಯಲ್ಲಿ ಬರುವ ವಿಷಯಗಳನ್ನೆಲ್ಲಾ ಮುಂಚೆಯೇ ಚರ್ಚಿಸಿ ಸರಕಾರವನ್ನು ಹೇಗೆ ವಿರೋಧಿಸಬೇಕು, ಎಂಬುದನ್ನು ತೀರ್ಮಾನಿಸಿಕೊಳ್ಳುತ್ತಿದ್ದೆವು. ನಾವುಗಳು ಒಂದು ಸ್ಟಾಂಡಿಂಗ್ ಕಮಿಟಿಯನ್ನು ಮಾಡಿಕೊಂಡು ಅದು ವರ್ಷದಲ್ಲಿ ೧೨ ತಿಂಗಳೂ ಕೆಲಸಮಾಡಿ ಅದರ ತೀರ್ಮಾನಗಳನ್ನು ಮನಸ್ಸಿಲ್ಲದ ಸರಕಾರದ ಮೇಲೆ ಒತ್ತಾಯ ಪಡಿಸಲು ಪುನಃ ಪುನಃ ಪ್ರಯತ್ನಿಸುತ್ತಿದ್ದೆವು. ದಿವಾನರು ಈ ಸ್ಟಾಂಡಿಂಗ್ ಕಮಿಟಿಯನ್ನು ಒಪ್ಪಲು ನಿರಾಕರಿಸಿದರು. ಮತ್ತು ಮನಸೋ ಇಚ್ಛೆ ಹೀಯಾಳಿಸುತ್ತಿದ್ದರು. ಆಗ ನಮಗೆ ವೆಂಕಟಕೃಷ್ಣಯ್ಯನವರೇ ಮುಂದಾಳುಗಳು ಮತ್ತು ಹಿತಚಿಂತಕರು. ದಿವಾನ್ ಶೇಷಾದ್ರಿ ಅಯ್ಯರ್‌ರವರ ತರ್ಜನೆ, ಗರ್ಜನೆಗಳಿಗೆ ಹೆದರದೆ ಶಾಂತವಾಗಿರುತ್ತಿದ್ದರು. ಪುನಃ ತಮ್ಮ ಅಂಶಗಳನ್ನು ತಿಳಿಸುತ್ತಿದ್ದರು. ಇವರ ಅಸಾಧಾರಣ ಧೈರ್ಯ ಮತ್ತು ತಾಳ್ಮೆ ನಮಗೆ ಆಶ್ವರ್ಯವುಂಟುಮಾಡುತ್ತಿತ್ತು. ಸರಕಾರದ ಬೆದರಿಕೆಗೆ ಇವರು ಸ್ವಲ್ಪವೂ ಕುಗ್ಗುತ್ತಿರಲಿಲ್ಲ. ಇವರಿಗೆ ಪಾರ್ಲಿಮೆಂಟರಿ ಜ್ಞಾನ ಅಪಾರವಾಗಿತ್ತು.

- ಬಿ. ಗರುಡಚಾರ್ : (ಶಿವಮೊಗ್ಗಾ ವಕೀಲರು ಮತ್ತು ಹಿಂದಿನ ಪ್ರಜಾಪ್ರತಿನಿಧಿ ಸಭಾ ಸದಸ್ಯರು)

ವೆಂಕಟಕೃಷ್ಣಯ್ಯನವರು ಮೈಸೂರಿನಲ್ಲಿ ಹುಟ್ಟದೆ ಬ್ರಿಟಿಷ್ ಇಂಡಿಯಾದಲ್ಲಿ ಹುಟ್ಟಿ ಮೈಸೂರಿನಲ್ಲಿ ಸೇವೆ ಮಾಡಿದಂತೆ ಅಲ್ಲಿ ಮಾಡಿದರೆ ಅವರು ಲೋಕಮಾನ್ಯ ಬಾಲ ಗಂಗಾಧರ್ ತಿಲಕರಿಗೆ ಎರಡನೆಯವರಾಗಿರುತ್ತಿದ್ದರು.

- ಸಿ. ಆರ್. ರೆಡ್ಡಿ (ನಿವೃತ್ತ ವಿದ್ಯಾ ಅಧಿಕಾರಿಗಳು)

ನಮ್ಮ ಸಾರ್ವಜನಿಕ ಜೀವನದಲ್ಲಿ ತಾತಯ್ಯನವರದು ಅತ್ಯಂತ ಉನ್ನತಸ್ಥಾನ. ಸಾರ್ವಜನಿಕರಿಗೆ ಪತ್ರಿಕೋದ್ಯೋಗಿಗಳಿಗೆ ಮತ್ತು ಉಪಾಧ್ಯಾಯರುಗಳಿಗೆ ಅವರು ಭೀಷ್ಮಾಚಾರ‍್ಯರು. ಯಾವ ದುರಾಸೆಗೂ ಬಲಿಬೀಳದೆ, ಯಾವಜ್ಜೀವವೂ ಅವರು ಸತ್ಯಕ್ಕಾಗಿ ಹೋರಾಡಿದ್ದಾರೆ. ಅವರನ್ನು ನಮ್ಮ ನಾಡು ಎಂದೆಂದಿಗೂ ಕೃತಜ್ಞತೆಯಿಂದ ಸ್ಮರಿಸಬೇಕು. ಅವರಿಗೆ ಎಷ್ಟೇ ಕಷ್ಟಗಳು ಬಂದಾಗ್ಯೂ ಅವೆಲ್ಲವನ್ನು ಧೈರ್ಯದಿಂದ ಸಹಿಸಿ ಒಂದೇ ಮನಸ್ಸಿನಿಂದ ದೇಶಸೇವೆ ಮಾಡುತ್ತಾ ಬಂದರು. ಇಂತವರು ಅತಿ ವಿರಳ.

- ಕೆ. ರಂಗಯ್ಯಗಾರ್

ಅವರ ಸ್ಕೂಲಾದ ಮರಿಮಲ್ಲಪ್ಪ ಸ್ಕೂಲ್‌ನಲ್ಲಿ ನಾನು ಓದಿದೆ. ಅವರು ನನ್ನ ಉಪಾಧ್ಯಾಯರಾಗಿದ್ದರು. ಪುಸ್ತಕಗಳ ಪಾಠಗಳನ್ನೇ ಅಲ್ಲದೆ ಜೀವನ ನಡೆಸಲು ಬೇಕಾದ ಧೈರ್ಯ, ಸಾಹಸ, ಸ್ವಾರ್ಥ ತ್ಯಾಗ ಮುಂತಾದ ಗುಣಗಳನ್ನು ನಮ್ಮ ಮನಸ್ಸಿನಲ್ಲಿ ನಾಟುವಂತೆ ಅವರು ಬೋಧಿಸುತ್ತಿದ್ದರು.

-ಬಿ, ಟಿ. ಕೇಶವಯ್ಯಂಗಾರ್ (ನಿವೃತ್ತ ರೆವಿನ್ಯೂ ಕಮಿಷನರು):

ಅರ್ಧ ಶತಮಾನಕ್ಕಿಂತಲೂ ಹೆಚ್ಚಾಗಿ ಸರ್ವತೋಮುಖ ಸೇವೆ ಸಲ್ಲಿಸಿ ಅದರಲ್ಲೇ ಹಣ್ಣಾದ ವೃದ್ಧ ಪಿತಾಮಹರು. ನಮ್ಮ ಸಾರ್ವಜನಿಕರಿಗೆಲ್ಲಾ ಆದರ್ಶಭೂತರು. ನಮ್ಮ ಯುವಕರು ಇವರಂತೆ ದೇಶೋಪಕಾರಿಗಳಾಗಿ ಜೀವಿಸಬೇಕು.

- ಕರ್ಪೂರ ಶ್ರೀನಿವಾಸರಾಯರು (ನಿವೃತ್ತ ಚೀಫ್ ಇಂಜಿನಿಯರ್)

ಎಂ. ವೆಂಕಟಕೃಷ್ಣಯ್ಯನವರನ್ನು ಕುಲಪತಿಗಳೆಂದು ಕರೆಯಬಹುದು. ಅವರ ಕೈಕೆಳಗೆ ವಿದ್ಯಾಭ್ಯಾಸವನ್ನು ಹೊಂದಿ ಮುಂದಕ್ಕೆ ಬಂದವರು ೧೦ ಸಾವಿರಕ್ಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಿದ್ದಾರೆ. ಅವರು ಬಡವರಿಗೆ ದಯಾಸಾಗರ, ಆಪದ್ಬಾಂಧವ ಮತ್ತು ಅನಾಥರಕ್ಷಕ. ನಮ್ಮ ಮೈಸೂರು ಸಾರ್ವಜನಿಕ ಜೀವನದ ಅಡಿಗಲ್ಲನ್ನು ಹಾಕಿದವರು ಅವರು. ಮೈಸೂರಿನ ಪತ್ರಿಕೋದ್ಯೋಗಿಗಳ ತಂದೆ. ಸಾರ್ವಜನಿಕ ಮತ್ತು ಉನ್ನತ ವಿಚಾರಕ್ಕೆ ಅವರು ಒಂದು ದೊಡ್ಡ ಆದರ್ಶ. ಧೈರ್ಯ ಮತ್ತು ಉದಾರತೆಯಲ್ಲಿ ಅವರು ಭೀಷ್ಮ. ಇಂತಹ ಮಹಾಪುರುಷರ ಕೈಕೆಳಗೆ ಕೆಲವು ವರ್ಷ ವಿದ್ಯಾರ್ಥಿಯಾಗಿದ್ದುದು ನನ್ನ ಪುಣ್ಯ.

-ಎಸ್.ಜಿ. ಶಾಸ್ತ್ರಿಯವರು (ಮೈಸೂರು ಕೈಗಾರಿಕಾ ಇಲಾಖಾ ಡೈರೆಕ್ಟರ್)

ವೆಂಕಟಕೃಷ್ಣಯ್ಯನವರ ಹೆಸರು ಹೇಳಿದೊಡನೆಯೇ ಅವರ ಪ್ರೇಮ ಮೂರ್ತಿ, ಅವರ ಸರಳತನ, ಅವರ ಸ್ಪಷ್ಟ ಒಡನುಡಿಗಳು, ಅವರ ನಿಸ್ಸೀಮ ದೇಶಾಭಿಮಾನ ಇವು ಕಣ್ಣುಮುಂದೆ ನಿಲ್ಲುತ್ತವೆ.

- ರಂಗನಾಥ ದಿವಾಕರ

ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಮೈಸೂರು ರಾಜ್ಯದಲ್ಲಿ ಪ್ರಜಾಭಿಪ್ರಾಯ ರೂಪುಗೊಂಡು,ಅದಕ್ಕೆ ಮನ್ನಣೆ ದೊರೆಯುವಂತೆ ಶ್ರಮಿಸಿದವರು ಶ್ರೀ ವೆಂಕಟಕೃಷ್ಣಯ್ಯನವರು. ಅವರು ಜನಸೌಕರ್ಯಕ್ಕಾಗಿ , ಜನಪ್ರಾತಿನಿಧ್ಯ ಪುರಸ್ಕಾರಕ್ಕಾಗಿ ನಡೆಸಿದ ಹೋರಾಟ ಅದ್ವಿತೀಯ. ಅವರು ಕೇವಲ ವೃದ್ಧಪಿತಾಮಹರಲ್ಲ; ಮೈಸೂರು ಸಾರ್ವಜನಿಕ ಕ್ಷೇತ್ರಕ್ಕೇ ಪಿತಾಮಹರು.

- ಎಂ.ಪಿ.ಎಲ್. ಶಾಸ್ತ್ರಿ

ವೆಂಕಟಕೃಷ್ಣಯ್ಯನವರು ತಮ್ಮ ಜೀವಿತಕಾಲದಲ್ಲಿ ಸತ್ಯ, ನ್ಯಾಯ, ನಿಷ್ಟಕ್ಷಪಾತ ನೀತಿಯನ್ನು ಎತ್ತಿ ಹಿಡಿದಿದ್ದಾರೆ. 'ಆಕಾಶ ಕೆಳಗೆ ಬಿದ್ದರೂ ಸರಿಯೇ, ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ' ಎಂಬ ದೃಢ ಸಂಕಲ್ಪದ ಮನುಷ್ಯರವರು. ಇಂತಹವರು ನಮ್ಮಲ್ಲಿ ಬಹಳ ಇಲ್ಲ.

-ಡಾ. ಮೈಲ್‌ವಾನಂ
(ಸೀನಿಯರ್ ಸರ್ಜನ್)

ಸುದ್ದಿ ಹಾಗೂ ಕಾರ್ಯಕ್ರಮಗಳು

ಕಾರ್ಯಕ್ರಮ :
ತಾತಯ್ಯ ನವರ ಜನ್ಮದಿನಾಚರಣೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ : ಸೆಪ್ಟೆಂಬರ್ ೧೧, ೨೦೧೧ , ಶಾರದಾವಿಲಾಸ ಸಭಾಂಗಣ , ಮೈಸೂರು ಮುಂದೆ ಓದಿ

ಗ್ಯಾಲರಿ

Mysore Thathayya Gallery

ಶ್ರೀ ವೆಂಕಟ ಕೃಷ್ಣಯ್ಯ ನವರ ಸಾರ್ವಜನಿಕ ಸೇವೆ ಹಾಗೂ ಅಸ್ಪೃಶ್ಯತಾ ನಿವಾರಣೆ ಮತ್ತು ದೀನ ದಲಿತರ ಬಗೆಗಿನ ಅವರ ಕಾಳಜಿಯ ಪ್ರಯತ್ನಗಳು ನನ್ನ ಮನಸ್ಸು ಗೆದ್ದಿವೆ . ನಾನು ಅವರನ್ನು 'ಮೈಸೂರಿನ ಭೀಷ್ಮ ' ನೆಂದು ಪ್ರಶಂಸಿಸುವೆ . ಮೈಸೂರಿನ ಜನತೆಯಲ್ಲಿ ಅವರು 'Grand old man of Mysore' ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .

– ಮಹಾತ್ಮಾ ಗಾಂಧಿ

ಶುದ್ಧ, ನಿಷ್ಕಳಂಕ ಜೀವನ ಹಾಗೂ ಸಾಮಾಜಿಕ ಸೇವೆಗೆ ಪ್ರಸಿದ್ಧರಾಗಿರುವ ಶ್ರೀ ವೆಂಕಟಕೃಷ್ಣಯ್ಯ ನವರು ಮೈಸೂರು ಪ್ರಾಂತ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಿದ್ದಾರೆ. ಅವರ ಸರಳತೆ ಹಾಗೂ ಸಾಮಾಜಿಕ ಕಾಳಜಿಯ ಕಾರಣದಿಂದ ಮೈಸೂರಿನ ಜನತೆ ಅವರನ್ನು 'ತಾತಯ್ಯ' ಎಂದು ಪ್ರೀತಿಯಿಂದ ಕರೆದು ಗೌರವಿಸಿದೆ.

– ದಿವಂಗತ ಶ್ರೀ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು

ಜನತೆಯ ಹಿತಕ್ಕಾಗಿ ಜೀವಾವಧಿ ಸೇವೆ ಮಾಡಿರುವ ವೆಂಕಟಕೃಷ್ಣಯ್ಯನವರ ದೇಶಾಭಿಮಾನ, ಸಾರ್ವಜನಿಕ ಸೇವಾವೃತ್ತಿ ಮತ್ತು ಸ್ವಾರ್ಥತ್ಯಾಗ ಇವುಗಳ ಬಗ್ಗೆ ಗೌರವ ಅಭಿಮಾನವನ್ನು ಹೊಂದಿರುವವರ ಪೈಕಿ ನಾನು ಯಾರಿಗೂ ಹಿಂದಿಲ್ಲ. ಮೈಸೂರಿನಲ್ಲಿ ನನ್ನ ಅಧಿಕಾರ ಸೇವಾವಧಿಯಲ್ಲಿ ಅವರು ನನಗೆ ಇತ್ತ ಬೆಂಬಲದ ಕೃತಜ್ಞತಾಪೂರ್ವಕ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುವುವು.

– ಎಂ. ವಿಶ್ವೇಶ್ವರಯ್ಯನವರು :

ಮೈಸೂರಿನ ಜನತೆಯಲ್ಲಿ ಸ್ವಾತಂತ್ರ್ಯದ ಬಗೆಗಿನ ಜಾಗೃತಿ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪಾತ್ರ ಅತ್ಯಂತ ಮಹತ್ವಪೂರ್ಣವಾದುದು. ಮೈಸೂರು ಪ್ರಾಂತ್ಯದ ಸಾಮಾಜಿಕ ಹಾಗೂ ಅರ್ಥಿಕ ಬೆಳವಣಿಗೆಗೆ ಅವರು ಅವಿಶ್ರಾಂತವಾಗಿ ದುಡಿದವರು.

– ಶ್ರೀ ವಿ.ವಿ. ಗಿರಿ, ಭಾರತದ ಮಾಜಿ ರಾಷ್ಟ್ರಪತಿಗಳು

The Anathalaya website